ಹತ್ತೂರ ಒಡೆಯ ಪುತ್ತೂರ ಮುತ್ತು ಮಹಾಲಿಂಗೇಶ್ವರ :-
ಪುತ್ತೂರು ಎಂದು ಹೆಸರು ಹೇಗೆ ಬಂತ್ತು ?
ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರಮುಖ ತಾಲೂಕು ಕೇಂದ್ರ. ಇದು ದಕ್ಷಿಣ ಕನ್ನಡದ ಎರಡನೆ ದೊಡ್ಡ ಪಟ್ಟಣ ಹಾಗೂ ಪ್ರಮುಖ ವ್ಯಾಪಾರೀ ಕೇಂದ್ರ. ಈ ಪಟ್ಟಣಕ್ಕೆ ಪುತ್ತೂರು ಎಂದು ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಮುಖ ದೇವಾಲಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ಈ ಪಟ್ಟಣದ ಹೆಸರಿಗೂ ನಂಟಿದೆ. ಪುತ್ತೂರು ಹಿಂದೆ "ಬಂಗ" ವಂಶದ ಅರಸರ ರಾಜಧಾನಿಯಾಗಿತ್ತು. ಹಿಂದೆ ಈ ದೇವಾಲಯ ಹಿಂಭಾಗದಲ್ಲಿ ಭಾರೀ ದೊಡ್ಡ ಕೆರೆಯನ್ನು ಮಾಡಲಾಯ್ತು. ಆದರೆ, ಅದರ ಆಳ ಎಷ್ಟೇ ಆದರೂ ನೀರು ದೊರಕಲೇ ಇಲ್ಲ. ಇದಕ್ಕಾಗಿ ದೇವಾಲಯದ ಆಡಳಿತ ವರ್ಗ ಸಾವಿರಾರು ಜನರಿಗೆ ಕೆರೆಯ ತಳದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದರು. ಜನರೆಲ್ಲರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತಂತೆ. ಸೇರಿದ ಜನರೆಲ್ಲ ಎದ್ದು ಹೊರಗೆ ಓಡಿದರು. ಅವರ ಎಲೆಯಲ್ಲಿದ್ದ ಅನ್ನದ ಅಗಳುಗಳೇ ಮುತ್ತುಗಳಾಗಿ ಬೆಳೆದವಂತೆ. ಮುತ್ತುಗಳು ಬೆಳೆದ ಊರು -"ಮುತ್ತೂರು" ಎಂದಾಗಿ, ಕ್ರಮೇಣ ಜನರ ಬಾಯಲ್ಲಿ "ಪುತ್ತೂರು" ಎಂದಾಯಿತೆಂದು ಪ್ರತೀತಿ.